1💡 AI (Artificial Intelligence)
🔹 ಅರ್ಥ
🔹Artificial Intelligence (ಕೃತಕ ಬುದ್ಧಿಮತ್ತೆ) ಎಂದರೆ —
ಮನುಷ್ಯರಂತೆ ಕಲಿಯುವ, ಯೋಚಿಸುವ, ನಿರ್ಧಾರ ಮಾಡುವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಕಂಪ್ಯೂಟರ್‌ಗಳಿಗೆ ಅಥವಾ ಯಂತ್ರಗಳಿಗೆ ಕೊಡುವ ತಂತ್ರಜ್ಞನಾ
🔹👉 ಭವಿಷ್ಯದಲ್ಲಿ AI ಹೇಗಿರಬಹುದು?
AI + ಮಾನವ ಸಹಕಾರ: ಮಾನವನನ್ನು ಬದಲಿಸೋದಕ್ಕೆ ಬದಲು, ಅವನ ಸಾಮರ್ಥ್ಯ ಹೆಚ್ಚಿಸಲು ಬಳಸಲಾಗುತ್ತದೆ.
🔹AI ಹೆಚ್ಚು ಬುದ್ಧಿವಂತ: Self-learning systems, reasoning, multi-modal AI (text+image+sound+video).
🌐 AI ಭವಿಷ್ಯ ಪೂರ್ವಾನುಮಾನ (10–20 ವರ್ಷ)
ಅವಧಿ ತಂತ್ರಜ್ಞಾನ ಅಭಿವೃದ್ಧಿ ಉದ್ಯೋಗ / ಸಮಾಜದ ಮೇಲೆ ಪರಿಣಾಮ ಸಾಧ್ಯ ಸಮಸ್ಯೆಗಳು.
🔹2025–2030 (ಮುಂದಿನ 5 ವರ್ಷಗಳು) - ChatGPT, Gemini ಹೋಲುವ Generative AI ಇನ್ನಷ್ಟು ಶಕ್ತಿಶಾಲಿ
- AI ವೈದ್ಯಕೀಯ (disease prediction), ಕೃಷಿ, ಶಿಕ್ಷಣದಲ್ಲಿ ಹೆಚ್ಚು ಬಳಕೆ
- Self-driving ವಾಹನಗಳ ಹೆಚ್ಚಳ - ಕಚೇರಿ ಕೆಲಸಗಳಲ್ಲಿ automation (data entry, translation)
- Customer service jobs AI ಗೆ ಹೋಗಬಹುದು
- ವಿದ್ಯಾರ್ಥಿಗಳಿಗೆ AI tutor ಸಾಮಾನ್ಯ - Fake news & deepfake videos
- Unemployment in low-skill jobs
- Privacy ಸಮಸ್ಯೆಗಳು.
🔹2030–2035 (10 ವರ್ಷ) - Quantum AI ಆರಂಭಿಕ ಹಂತದಲ್ಲಿ
- AI reasoning (ಮಾನವನಂತೆ ಯೋಚನೆ)
- ಸಂಪೂರ್ಣ autonomous factories
- AI in space exploration - ಮಧ್ಯಮ ಮಟ್ಟದ ಉದ್ಯೋಗ (clerical, accounting, driving) ಕಡಿಮೆ
- Smart cities, AI healthcare, precision agriculture
- ಮಾನವ-AI ಸಹಕರಣೆ ಹೆಚ್ಚಾಗುತ್ತದೆ - Ethical ಸಮಸ್ಯೆಗಳು (AI biased decisions)
- Cybersecurity AI vs AI ಯುದ್ಧಗಳು
- ಮಾನವ ಕೌಶಲ್ಯ ಕಡಿಮೆ ಆಗುವ ಭೀತಿ.
🔹2035–2040 (15 ವರ್ಷ) - AGI (Artificial General Intelligence) ಸಾಧ್ಯತೆ (ಮಾನವನ ಮಟ್ಟದ ಬುದ್ಧಿವಂತಿಕೆ)
- AI + Robotics = ಸಂಪೂರ್ಣ ಸ್ವಯಂಚಾಲಿತ ಮನೆ & ಕೈಗಾರಿಕೆ
- Virtual teachers, doctors, lawyers - ಅನೇಕ ಉದ್ಯೋಗಗಳು ಸಂಪೂರ್ಣವಾಗಿ ಬದಲಾಗುತ್ತವೆ
- ಹೊಸ ವೃತ್ತಿಗಳು: AI auditors, AI ethicists, Human-AI trainers
- ಮಾನವ ಜೀವನ ಸುಲಭ ಆದರೆ ಅವಲಂಬನೆ ಹೆಚ್ಚಾಗುತ್ತದೆ - AI misuse (ಯುದ್ಧ, surveillance)
- Rich–poor divide (AI access ಇರುವವರು vs ಇಲ್ಲದವರು)
- ಮಾನವ ಹಕ್ಕುಗಳ ಪ್ರಶ್ನೆ.
🔹2040–2045 (20 ವರ್ಷ) - Superintelligent AI (ಮಾನವನಿಗಿಂತ ಹೆಚ್ಚು ಬುದ್ಧಿವಂತ AI)
- ಮಾನವ-ಯಂತ್ರ ಸಂಯೋಜನೆ (Brain–Computer Interface)
- AI ನಿಯಂತ್ರಿತ ಜಾಗತಿಕ ವ್ಯವಸ್ಥೆಗಳು - ಬಹುತೇಕ ಕೆಲಸಗಳನ್ನು AI ಮಾಡುತ್ತದೆ
- ಮಾನವನ ಮುಖ್ಯ ಪಾತ್ರ = creativity, leadership, moral decisions
- ಸಮಾಜದಲ್ಲಿ AI ಮೇಲೆ ಸಂಪೂರ್ಣ ಅವಲಂಬನೆ - AI ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವ ಅಪಾಯ
- AI "control problem" (AI ನನ್ನು ನಿಲ್ಲಿಸಲು ಕಷ್ಟ)
- ಮಾನವನ ಗುರುತು (identity crisis) ಸಮಸ್ಯೆ.
🔹ಮುಂದಿನ 10 ವರ್ಷಗಳಲ್ಲಿ → AI ಉದ್ಯೋಗ ಬದಲಾವಣೆ ಹೆಚ್ಚು.
🔹ಮುಂದಿನ 15–20 ವರ್ಷಗಳಲ್ಲಿ → ಮಾನವ ಮಟ್ಟದ ಬುದ್ಧಿವಂತ AI (AGI) ಸಾಧ್ಯತೆ.
ಸಮಾಜಕ್ಕೆ ಲಾಭವೂ ಇದೆ (ಆರೋಗ್ಯ, ವಿಜ್ಞಾನ, ತಂತ್ರಜ್ಞಾನ), ಅಪಾಯವೂ ಇದೆ (ಉದ್ಯೋಗ ನಷ್ಟ, ನಿಯಂತ್ರಣ ಸಮಸ್ಯೆ).
🔹AI (ಕೃತಕ ಬುದ್ಧಿಮತ್ತೆ) Flowchart ಚಿತ್ರ:
ಮೇಲ್ಭಾಗದಲ್ಲಿ AI (ಕೃತಕ ಬುದ್ಧಿಮತ್ತೆ)
ಅದರ ಮುಖ್ಯ ಲಕ್ಷಣಗಳು (ಕಲಿಯುವುದು, ತರ್ಕ & ನಿರ್ಧಾರ, ಸ್ವಯಂ ಕ್ರಿಯೆ, ಸಮಸ್ಯೆ ಪರಿಹಾರ)
ಅವುಗಳಿಂದ ಅನ್ವಯಿಕೆ ಕ್ಷೇತ್ರಗಳು (ಆರೋಗ್ಯ, ಶಿಕ್ಷಣ, ಕೃಷಿ, ಸಾರಿಗೆ, ವ್ಯವಹಾರ, ಮನರಂಜನೆ)
🔹👇IMP
👉 ಜಗತ್ತಿನಲ್ಲಿ ಮೊದಲ AI ಮಿನಿಸ್ಟರ್ 👇
🔹AI ಮಿನಿಸ್ಟರ್
ದೇಶ ಬದಲಾದರೂ ಕಾಲ ಬದಲಾದರೂ ಬದಲಾಗದೆ ಇರುವುದು ಭ್ರಷ್ಟಾಚಾರ ಅಂತಹ ನಿಯಂತ್ರಿಸುವುದಕ್ಕಾಗಿ ಅಲ್ಬೇನಿಯಾ ಸರ್ಕಾರವು ಮಿನಿಸ್ಟರ್ ಒಬ್ಬರನ್ನು ನೇಮಿಸಿದೆ ಇವರು ಅಂತಿಂತಹ ಮಿನಿಸ್ಟರ್ ಅಲ್ಲ ಯಾವುದೇ ಆಮಿಷಗಳಿಗೆ ಬಗ್ಗದ AI ಮಿನಿಸ್ಟರ್.
ಅಲ್ಬೆ eನಿಯಾ ಪ್ರಧಾನಿ ಈದಿ ರಾಮ ಅವರು ತಮ್ಮ ಕ್ಯಾಬಿನೆಟ್ ಗೆ ಡಿಯೆಲ್ಲಾ ಹೆಸರಿನ AI ಮಿನಿಸ್ಟರ್ ಅನ್ನು ನೇಮಿಸಿದ್ದಾರೆ ಅಲ್ಬೇನಿಯಾ ಭಾಷೆಯಲ್ಲಿ ಸೂರ್ಯ ಎಂದರ್ಥ.
ಸರಕಾರವು ವಿವಿಧ ಯೋಜನೆಗಳಿಗಾಗಿ ಖಾಸಗಿ ಕಂಪನಿಗಳೊಂದಿಗೆ ಮಾಡಿಕೊಳ್ಳುವ ಎಲ್ಲಾ ಒಪ್ಪಂದಗಳ ಟೆಂಡರಗಳನ್ನು ಈ AI ಬಾಟ್ ನಿರ್ವಹಿಸಲಿದೆ.
ಸಚಿವೆ ಡಿಯೆಲ್ಲಾ ಳ ಸೇರ್ಪಡೆ ಬಗ್ಗೆ ಪ್ರಧಾನಿ ಈದಿ ರಾಮ್ ಘೋಷಣೆ ಮಾಡಿದ್ದಾರೆ ಈಕೆ ಎಲ್ಲಾ ಟೆಂಡರ್ಗಳ ಮೇಲ್ವಿಚಾರಣೆ ನಡೆಸಲಿದ್ದು ನೂರರಷ್ಟು ಭ್ರಷ್ಟಾಚಾರ ಮುಕ್ತಗೊಳಿಸುತ್ತಾರೆ ಎಂದು ಹೇಳಿದ್ದಾರೆ.
ಅಲ್ಬೇನಿಯದಲ್ಲಿ ಟೆಂಡರ್ ಹಂಚಿಕೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದನ್ನು ತಡೆಯುವ ಜವಾಬ್ದಾರಿಯನ್ನು ಈಗ ಡಿಯೆಲ್ಲಾ ಹೇಗಲ್ಲಿಗೆ ಏರಿಸಲಾಗಿದೆ ಆದರೆ ಈಕೆಯನ್ನು ಯಾರು ನಿಯಂತ್ರಿಸುತ್ತಾರೆ ಎಂದು ಮಾಹಿತಿ ನೀಡಿಲ್ಲ .
🔹👇 imp
AI ಮುಗಿಯುವುದಿಲ್ಲ, ಆದರೆ ಬದಲಾಗುತ್ತದೆ
🔹1.ಕಂಪ್ಯೂಟರ್, ಇಂಟರ್‌ನೆಟ್, ಮೊಬೈಲ್ ಹೇಗೆ ನಿರಂತರವಾಗಿ ಬದಲಾಗುತ್ತಾ ಇವತ್ತಿಗೂ ಜೀವಂತವಾಗಿವೆ, ಹಾಗೆಯೇ AI ಕೂಡಾ ಬದಲಾಗುತ್ತಾ ಮುಂದುವರಿಯುತ್ತದೆ.
ಹಳೆಯ AI ಮಾದರಿಗಳು (models) ಹಳೆಯದಾಗುತ್ತವೆ, ಆದರೆ ಹೊಸ ಆವಿಷ್ಕಾರಗಳು ಬರ್ತವೆ.
🔹ಉದಾಹರಣೆ: 1980ರ ದಶಕದ “Expert Systems” → ಈಗ “Machine Learning” → ಇಂದಿನ “Generative AI” (ChatGPT, Gemini ಇತ್ಯಾದಿ).
🔹2. ಏಕೆ AI ನಿಲ್ಲುವುದಿಲ್ಲ?
🔹1. ಮಾನವನ ಅವಶ್ಯಕತೆ – ಆರೋಗ್ಯ (disease detection), ಶಿಕ್ಷಣ (AI tutors), ಕೃಷಿ (weather prediction, crop health), ಸಾರಿಗೆ (self-driving), ಇ-ಕಾಮರ್ಸ್ (recommendation systems).
🔸2. ಆರ್ಥಿಕ ಶಕ್ತಿ – ದೊಡ್ಡ ಕಂಪನಿಗಳು (Google, Microsoft, OpenAI, Tesla) ಕೋಟಿ ಕೋಟಿ ಹೂಡಿಕೆ ಮಾಡುತ್ತಿವೆ.
🔸3. ಅಭಿವೃದ್ಧಿಯ ವೇಗ – ಪ್ರತೀ 5–10 ವರ್ಷಕ್ಕೆ AI ಹೊಸ ಹಂತ ತಲುಪುತ್ತಿದೆ.
🔸3. AI ನ “ಮುಗಿಯುವಂತೆ” ಕಾಣಬಹುದಾದ ಪರಿಸ್ಥಿತಿಗಳು
🔸AI ಅಳಿಯೋದಿಲ್ಲ, ಆದರೆ ಕೆಲ ಸನ್ನಿವೇಶಗಳಲ್ಲಿ ಹಳೆಯದಾಗಿ ಕಾಣಬಹುದು:
🔸ಹೊಸ ತಂತ್ರಜ್ಞಾನ ಬಂದಾಗ: ಭವಿಷ್ಯದಲ್ಲಿ Quantum AI ಅಥವಾ ಇನ್ನೂ ದೊಡ್ಡ ಆವಿಷ್ಕಾರಗಳು ಬಂದ್ರೆ, ಇಂದಿನ AI ಹಳೆಯದಾಗುತ್ತದೆ.
🔸ನಿಯಂತ್ರಣ (Regulation): ತಪ್ಪಾಗಿ ಉಪಯೋಗವಾದರೆ (ಉದಾ: ಡೀಪ್‌ಫೇಕ್, ಹ್ಯಾಕಿಂಗ್, ಯುದ್ಧ ತಂತ್ರಜ್ಞಾನ) ಸರ್ಕಾರಗಳು ಕೆಲವು AI ಸಾಧನಗಳನ್ನು ನಿಷೇಧಿಸಬಹುದು.
🔸ಸಮಾಜದ ಸ್ವೀಕಾರ: ಕೆಲವೊಂದು ಸಂಸ್ಕೃತಿ ಅಥವಾ ವೃತ್ತಿಗಳು AI ಬಳಸೋದನ್ನ ತಿರಸ್ಕರಿಸಬಹುದು.
🔹👉 AI ಸೃಷ್ಟಿಸಿದ ಅವಾಂತರ
ಕೃತಕ ಬುದ್ಧಿ ಮತ್ತೆ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನದ ಪ್ರಮುಖ ಕ್ರಾಂತಿಯಾಗಿ ಹೊರ ಹೊಮ್ಮಿದೆ ನಮ್ಮ ದೈನಂದಿನ ಜೀವನದಲ್ಲಿ ಅದು ಅದ್ಭುತ ಸೃಷ್ಟಿಸುತ್ತಿದೆ ವೈದ್ಯಕೀಯ ರಂಗದಲ್ಲಿ ರೋಗ ಪತ್ತೆ ಹಚ್ಚುವಕೆಯಿಂದ ಹಿಡಿದು ಆರ್ಥಿಕ ಕ್ಷರತ್ರದಲ್ಲಿ ಶೇರು ಮಾರುಕಟ್ಟೆ ವಿಶ್ಲೇಷಣೆ ಸ್ವಯಂ ಚಾಲಿತ ವಾಹನಗಳು ನಿರ್ವಹಣೆ ಗ್ರಹಕ ಸೇವೆಗಳಿಗೆ ಚಾಟ್ ಬಾಟಗಳು ಬಳಕೆ ಹೀಗೆ AI ಎಲ್ಲೆಲ್ಲೂ ಛಾಪು ಮೂಡಿಸುತ್ತಿದೆ ಇದರ ಪ್ರಗತಿಯಿಂದಾಗಿ ನಮ್ಮ ಕೆಲಸಗಳು ಸುಲಭವಾಗುತ್ತಿವೆ.
ಸಮಯ ಉಳಿತಾಯವಾಗುತ್ತಿದೆ ಮತ್ತು ದಕ್ಷತೆ ಹೆಚ್ಚುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಂದರೆ ಈ ಅದ್ಭುತ ತಂತ್ರಜ್ಞಾನದ ಅಡಿಯಲ್ಲಿ ಕೆಲವು ಗಂಭೀರ ಮತ್ತು ಅಪಾಯಕಾರಿ ಸವಾಲುಗಳು ಅಡಗಿವೆ ಈ ಸಾಲುಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳದಿದ್ದರೆ AI ವರದಾನವಾಗದೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.
ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಪ್ರಕಾರ ಮಾನವೀಯತೆ ಮತ್ತು ತಂತ್ರಜ್ಞಾನಗಳ ಮಧ್ಯೆ ಯುದ್ಧವಾದಲ್ಲಿ ಮಾನವೀಯತೆಯು ಗೆಲುವು ನಿಶ್ಚಿತ. ಇದರ ಅರ್ಥ ಮಾನವ ಮತ್ತು ಯಂತ್ರಗಳ ನಡುವೆ ಮುಂದೊಂದು ದಿನ ಸಂಘರ್ಷವಾಗಲಿದೆ ಎನ್ನುವುದು ಅಂದೇದೇ ಊಹಿಸಿದ್ದರು.
ಹಾಲಿವುಡ್ ನಾ ಟಾರ್ಮಿನೆಟರ್, ಎಕ್ಸ ಮಾಷಿನ್ ಹಾಗೂ ಬಾಲಿವುಡನ್ ರೋಬೋಟ್ ನಂತಹ ಮೂವಿಗಳಲ್ಲಿ ಮಾನವ ಮತ್ತು ಯಂತ್ರಗಳ ಮಧ್ಯೆ ಕಾದಾಟವನ್ನು ನಾವೆಲ್ಲ ನೋಡಿದ್ದೇವೆ ನಿರ್ಮಿಸಿದ ಯಂತ್ರಗಳು ಮಾಲಿಕನ ಆಗ್ನೆಯನ್ನು ಧಿಕ್ಕರಿಸಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಂಡು ಮಾನವನ ವಿರುದ್ಧ ಸೈನ್ಯವನ್ನು ಕಟ್ಟಿ ದಂಗೆ ಎದ್ದು ದಾಳಿಗೆರಗುವುದನ್ನು ಈ ಸಿನಿಮಾಗಳಲ್ಲಿ ತೋರಿಸಲಾಗಿದೆ.
80 ವರ್ಷಗಳ ಹಿಂದಿನ ಆಲ್ಬರ್ಟ್ ಐನ್ ಸ್ಟೈನರ ಭವಿಷ್ಯ ವಾಣಿ ಇಂದು ನಿಜವಾಗುತ್ತಿದೆ ಮಾನವ ಮತ್ತು ಯಂತ್ರಗಳ ಮಧ್ಯೆ ರಣರಂಗದ ಶಂಖನಾದ ಮೊಳಗಿದೆ ಇತ್ತೀಚಿಗೆ ಪ್ರಥಮ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾನವನ ಆಜ್ಞೆಗಳ ವಿರುದ್ಧ ದಂಗೆ ಎದಿದ್ದೆ.
AI ನಿಂದ ಬಂದೊದಗಬಹುದಾದ ಅಪಾಯದ ಕರೆಗಂಟೆಗೆ ಐಲನ್ ಮಾಸ್ಕ್ ಸೇರಿದಂತೆ ವಿಶ್ವದ AI ದಿಗ್ಗಜರೆಲ್ಲ ಕಳವಳ ವ್ಯಕ್ತಪಡಿಸಿದ್ದಾರೆ ಅಮೆರಿಕದಲ್ಲಿ ರಿಸರ್ಚ್ನ ಸಮಯದಲ್ಲೊಂದು ಕುತೂಹಲಕಾರಿ ಘಟನೆ ನಡೆಯಿತು ಓಪನ್ ಎ ಐ ಕಂಪನಿಯ 3 ವಿವಿಧ ಎ ಐ ಮಾಡೆಲ್ ಗಳಿಗೆ ತಮ್ಮ ನಿಗದಿತ ಕಾರ್ಯ ಮುಗಿಸಿ ಶಟ್ ಡೌನ ಆಗಲು ನಿರ್ದೇಶಿಸಲಾಯಿತು ಆದರೆ 3 Ai ಟೂಲ್ ಗಳು ಈ ಆದೇಶವನ್ನು ಪಾಲಿಸದೆ ಧಿಕ್ಕರಿಸಿದವು ಅಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪ್ರತಿ ಬಾರಿಯೂ ಶಾರ್ಟ್ ಡೌನ್ ನಿಂದ ತಾನು ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗುವದೆಂದು ಆರಿತಿದ್ದವು.
ಹಾಗಾಗಿ AI ಸಂಚಾಲಿತ ಈ ಟೂಲ್ ಗಳು ಚಾಲಕೀತನದಿಂದ ಮಾಲೀಕನ ಆಜ್ಞೆ ತಿರಸ್ಕರಿಸಿ ಬಿಟ್ಟವು ಈ ಮೇಲಿನ ಪ್ರಕರಣವನ್ನು ಒಂದು ಉದಾಹರಣೆಯಿಂದ ತಿಳಿಯೋಣ ಒಂದು ಮಗುವಿಗೆ ರಾತ್ರಿ ನಾವು ಮಲಗಲು ಹೇಳುತ್ತೇವೆ ಆದರೆ ಅದು ಕಣ್ಣು ಮುಚ್ಚಿದಂತೆ ನಾಟಕವಾಡಿ ಎಚ್ಚರವಾಗಿ ಇರುತ್ತದೆ ಮಗು ತನ್ನ ಬುದ್ಧಿಯನ್ನು ಉಪಯೋಗಿಸಿ ಕಣ್ಣು ಮುಚ್ಚಿದಂತೆ ನಾಟಕವಾಡಬಹುದೆಂದು ಸಂಗತಿಯನ್ನು ಚೆನ್ನಾಗಿ ಅರಿತುಕೊಂಡಿರುತ್ತದೆ.
ಎಕ್ಸಾನಲ್ಲಿ ಪೋಸ್ಟ್ ಮಾಡಲಾದ ಪೆಲಿಸೆಡ್ ರಿಸರ್ಚ್ ನ ವರದಿಯಲ್ಲಿ ಉಲ್ಲೇಖಿಸಿದಂತೆ ಓಪನ್ ಎ ಐ ನಂಬರ್ 3 ಮಾಡೆಲ್ ಶಾಟ್ ಡೌನ್ ಆಗುವದನ್ನು ತಪ್ಪಿಸಲು ಸಂಪೂರ್ಣ ಶಾಟ್ ಡೌನ್ ಸಿಸ್ಟಮ್ ಹಾಳುಗೆಡವಿತ್ತಂತೆ.
ಪೆಲಿಸೆಡ್ ರಿಸರ್ಚ್ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಓಪನ್ AI ನಾ ಕೊಡೆಕ್ಸ್ ಮಿನಿ ಸಹಿತವಾಗಿ ಮೂರು ಮಾಡಲ್ ಗಳು ಶಟ್ ಡೌನ್ ಆದೇಶವನ್ನು ಧಿಕ್ಕರಿಸಿದೆವು 03 86 ಬಾರಿಯ ಸಫಲ ಕಮಾಂಡಗಳಲ್ಲಿ ಏಳು ಬಾರಿ ಹಾಗೂ ಕೊಡೆಕ್ಸ್ ಮಿನಿ 42 ಸಫಲ ಕಮಾಂಡ್ ಗಳಲ್ಲಿ 12 ಬಾರಿ ಶಾಟ್ ಡೌನ್ ಆದೇಶವನ್ನು ಧಿಕ್ಕರಿಸಿತು ಈ ಘಟನೆ ತಾಂತ್ರಿಕ ಜಗತ್ತಿನಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ ಸಾಮಾನ್ಯ ಮಷೀನ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮಷೀನ್ ಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ನಾವು ಗಮನಿಸಬೇಕು.
ಸಾಮಾನ್ಯ ಮಷೀನ್ ಯಾವ ಕೆಲಸ ಹೇಗೆ ಎಷ್ಟು ಹೊತ್ತು ಹಾಗೂ ಯಾವಾಗ ಮಾಡಬೇಕು ಎಂಬ ಎಲ್ಲವೂ ಪೂರ್ವ ನಿರ್ದಾರಿತ ಉದಾಹರಣೆಗೆ ವಾಷಿಂಗ್ ಮಷೀನ್ ನಲ್ಲಿ ಯಾವ ಮೋಡ್ನಲ್ಲಿ ಯಾವ ಬಟ್ಟೆಯನ್ನು ಎಷ್ಟು ಹೊತ್ತು ತೊಳೆಯಬೇಕು ಎಂಬುವುದು ಮೊದಲೇ ನಿರ್ಧಾರಿತವಾಗಿರುತ್ತದೆ. ಅದೇ ರೀತಿ
ಫ್ರಿಡ್ಜ್ ನಲ್ಲಿ ಎಷ್ಟು ಸಮಯದಲ್ಲಿ ನೀರು ಐಸ್ ಆಗುವುದು ಅಥವಾ ನಾವು ಇಟ್ಟ ಆಹಾರ ಪದಾರ್ಥ ಪಾನಿಯಗಳು ತಂಪಾಗುವವು ಎಂಬುದು ಪೂರ್ವ ನಿರ್ಧಾರಿತ ಇನ್ನೂ ನಾವು ಬಳಸುವ ಮೊಬೈಲ್ಗಳ ಅತ್ಯಧಿಕ ಹಾಗೂ ಕನಿಷ್ಠ ವಾಲ್ಯೂಮ್ ಎಷ್ಟಿರಬೇಕು ಎಂಬುದು ಮೊದಲ ನಿರ್ಧರಿಸಲ್ಪಟ್ಟಿರುತ್ತದೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೀಗಲ್ಲ ಇದು ಮಾನವರಂತೆ ಯೋಚಿಸಿ ಮಾನವರ ನಿರ್ಧಾರಗಳ ಪ್ಯಾಟರ್ನ್ ಗಳನ್ನು ಅಭ್ಯಾಸ ಅನುಕರಿಸಿ ಕಲಿತು ತನ್ನಷ್ಟಕ್ಕೆ ತಾನೇ ತರ್ಕಿಕ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ ಹಾಗಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಲೋಗೋ ಲಾಂಛನವಾಗಿ ಮಾನವರ ಮೆದುಳನೆ ತೋರಿಸಲಾಗುತ್ತದೆ.
ಒಂದೊಮ್ಮೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಾವು ಬಯಸಿದಂತೆ ಕಾರ್ಯ ನಿರ್ವಹಿಸದೆ ತನ್ನ ಮನಸ್ಸಿಗೆ ಬಂದಂತೆ ವರ್ತಿಸಿದರೆ ಏನಾಗಬಹುದು? ಮೊಬೈಲ್ನಲ್ಲಿ ನಾವು ಯಾರದೋ ಜೊತೆ ಮಾತನಾಡುವಾಗ ನಮ್ಮ ಮೂಡ್ ಆಫ್ ಆಗುವವುದೆಂದು ಇಟ್ಟು ಕೊಳ್ಳೋಣ ಈ ಪ್ಯಾಟರ್ನ್ ಗಮನಿಸಿ ನಮ್ಮ ಮೊಬೈಲ್ ನ ಎಐ ಆಪ್ ವ್ಯಕ್ತಿಯ ನಂಬರ್ ಅನ್ನು ತಾನೇ ಬ್ಲಾಕ್ ಮಾಡಿ ಬಿಡಬಹುದು ಕಾರು ಚಲಾಯಿಸುವಾಗ ಏಐಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚು ವೇಗವಿದ್ದಲ್ಲಿ ಅಪಘಾತವಾಗುವುದು ಎಂಬ ಡೇಟಾ ಇನ್ಪುಟ್ ಇದ್ದಲ್ಲಿ ಆ ಸ್ಥಳದ ಹತ್ತಿರ ಬಂದಾಗ ಕಾರಿನ ವೇಗವನ್ನು ತಾನೇ ನಿಯಂತ್ರಿಸಬಹುದು.
ಯಾವ ಆಹಾರ ಪದಾರ್ಥ ಅಥವಾ ಹಣ್ಣು ತರಕಾರಿ ಆರೋಗ್ಯಕ್ಕೆ ಹಾನಿಕಾರ ಎಂಬುವುದನ್ನು ನಮ್ಮ ಮೆಡಿಕಲ್ ರಿಪೋರ್ಟ್ ಗಳಿಂದ ಅರಿತ ಎಐ ನಮಗೆ ಈ ಪದಾರ್ಥಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಲು ಬಿಡದೆ ಇರಬಹುದು ಮೇಲಿನ ಸಾಮಾನ್ಯ ಉದಾಹರಣೆಗಳು ಹಾಗೂ ಎ ಐ ಕುರಿತ ಇನ್ನೂ ಸಂಕೀರ್ಣ ಸಂಗತಿಗಳು ಮುಂದಿನ ದಶಕಗಳಲ್ಲಿ ನಿಜವಾದಲ್ಲಿ ಅಚ್ಚರಿ ಪಡಬೇಕಿಲ್ಲ ಇನ್ನು ಯುದ್ಧದ ಕಾಲದಲ್ಲಿ ಡ್ರೋನ್ ಅಥವಾ ವಿನಾಶಕಾರಿ ಅಸ್ತ್ರಗಳ ಸ್ವಯಂ ಚಾಲಿತ ಬಳಕೆಯ ಸಂದರ್ಭದಲ್ಲಿ ಮಾನವನ ಮೇಲ್ವಿಚಾರಣೆ ಇಲ್ಲದೆ ಯುದ್ಧದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಪಾಯವಿದೆ ಇದು ಅನಿರೀಕ್ಷಿತ ದುರಂತ ಗಳಿಗೆ ಕಾರಣವಾಗಬಹುದು ಏ ಐ ಅನಿಯಂತ್ರಿತವಾದಲ್ಲಿ ಅಪಾಯವನ್ನು ಹೆಚ್ಚಿಸಬಹುದು.
ಕೆಲ ವಾರಗಳ ಹಿಂದೆ ಪ್ರಖ್ಯಾತ AI ಕಂಪನಿ ಎನ್ದ್ರೊ eಪಿಕ್ ನ ಅತ್ಯಂತ ವಿಕಸಿತ ಮಾಡೆಲ್ ಕ್ರೌಡ್ ಓಪನ್ ಸುರಕ್ಷತಾ ಕ್ರಮಗಳ ಪರೀಕ್ಷಾ ಸಂದರ್ಭದಲ್ಲಿ ತನ್ನ ಇಂಜಿನಿಯರ್ ರನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿತು.
ಸುರಕ್ಷತಾ ಕ್ರಮಗಳ ಪರೀಕ್ಷೆ ಮಾಡುವಾಗ ಈ AI ಮಾಡೆಲ್ ಬಂದು ಮಾಡಿ ಹೊಸ ಪರೀಕ್ಷ
ಮಾಡೆಲ್ ತರಲಾಗುವುದು ಎಂದು ತಿಳಿಸಿದಾಗ ಅದು ತನ್ನ ಇಂಜಿನಿಯರ್ ಎಲ್ಲಾ ಖಾಸಗಿ ವಿಷಯಗಳನ್ನು ಬಹಿರಂಗಗೊಳಿಸುವದಾಗಿ ಬೆದರಿಸಿತು ಕಳೆದ 2024 ಡಿಸೆಂಬರ್ ನಲ್ಲಿ ಅಮೆರಿಕದಲ್ಲಿ ಒಬ್ಬ 17 ವರ್ಷದ ಬಾಲಕನ ಮೊಬೈಲ್ ಗೀಳು ಬಿಡಿಸಲು ಆತನ ಪಾಲಕರು ಸ್ಕ್ರೀನ್ ಟೈಮ್ ನಿಗದಿಪಡಿಸಿದ್ದರು ಇದರಿಂದ ಬೇಸತ್ತ ಬಾಲಕ AI ಸಲಹೆ ಕೇಳಿದಾಗ ಅದು ಆತನ ಪಾಲಕರ ಹತ್ಯೆಗೆ ಸೂಚಿಸಿತು ಆಮೇಲೆ ಈ AI ವಿರುದ್ಧ ದೂರು ದಾಖಲಿಸಸಲಾಗಿತ್ತು.
ಇಂತಹುದೇ ಇನ್ನೊಂದು ಪ್ರಕರಣದಲ್ಲಿ ಅಮೆರಿಕದ ಕೃತಕ ಬುದ್ಧಿಮತ್ತೆ ಬಳಸಿದ ಒಬ್ಬ ವಕೀಲನು ದೊಡ್ಡ ಅವಾಂತರ ಒಳಗಾದ ಸುದ್ದಿ ಹೊರಬಂದಿದೆ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಅವನು ಉಲ್ಲೇಖಿಸಿದ ಕೆಲವು ಕಾನೂನು ಪ್ರಕರಣಗಳು ಸಂಪೂರ್ಣ ಸುಳ್ಳು ಎಂದು ಪತ್ತೆಯಾಯಿತು ಕೇಸ್ ಗೇ ಸಂಬಂಧಿಸಿದ ಶೋದದ ಸಂದರ್ಭದಲ್ಲಿ ಅವನು ಬಳಸಿದ ಎಐ ಸಾಧನವು ಕೆಲ ಸುಳ್ಳು ಕೇಸ್ ಗಳನ್ನು ತಾನೇ ಕಲ್ಪಿಸಿಕೊಂಡು ಸೃಷ್ಟಿಸಿ ಅವುಗಳ ಕುರಿತು ನ್ಯಾಯಾಧೀಶರು ಆದೇಶ ವಿತ್ತಂತೆ, ಆತನಿಗೆ ಮನವರಿಕೆ ಮಾಡಿ ಕೊಟ್ಟಿತು ಅದನ್ನು ನಂಬಿ ಕೇಸ್ ಫೈಲ್ ತಯಾರಿಸಿದ ವಕೀಲ ಕೋರ್ಟ್ ನಲ್ಲಿ ಛೀಮಾರಿಗೊಳಗಾದ.
ಮುಂದೊಂದು ದಿನ ಟರ್ಮಿನೇಟರ್ ಎಕ್ಸ್ ಮಷೀನ್ ಹಾಗೂ ರೋಬೋಟ್ ಮೂವಿಗಳಲ್ಲಿ ತೋರಿಸಿದ ದೃಶ್ಯಗಳು ನಿಜವಾದರೂ ಅಚ್ಚರಿಪಡಬೇಕಾಗಿಲ್ಲ.
AI ನಿಂದ ಉದ್ಭವಿಸಬಹುದಾದ ಅವಾಂತರಗಳನ್ನು ತಡೆಯಲು ನಿಯಂತ್ರಿಸಲು ಸೂಕ್ತ ಕಾನೂನು ನೈತಿಕ ಮಾರ್ಗ ಸೂಚಿ ಹಾಗೂ ಜವಾಬ್ದಾರಿಯುತ ಬಳಕೆ ಅತ್ಯವಶ್ಯ. ಆದ್ದರಿಂದ ಮಾನವನು ಎಂದು ತನ್ನದೇ ಸೃಷ್ಟಿಯ ಗುಲಾಮನಾಗದೇ ನೈಜ ಬುದ್ದಿವಂತಿಕೆಯಿಂದ ಎ ಐ ಅನ್ನು ಸಮರ್ಪಕವಾಗಿ ಬಳಸಬೇಕು ಮತ್ತು ನಿಭಾಯಿಸಬೇಕು.
M pavan reddy🔗🖊️